     ಮೂಲದೊಡನೆ ಪರಿಶೀಲಿಸಿ

ಐಸೊಬಾರುಗಳು (ಪರಮಾಣು ಬೈಜಿಕ): ಒಂದೇ ದ್ರವ್ಯಮಾನ ಸಂಖ್ಯೆ (ಮಾಸ್ ನಂಬರ್) ಇರುವ ಆದರೆ ಭಿನ್ನ ವಿದ್ಯುದಂಶ (ಜಾರ್ಜ್) ಸಂಖ್ಯೆ ಇರುವ ಪರಮಾಣು ಬೀಜಗಳಿಗೆ ಈ ಹೆಸರಿದೆ (ನ್ಯೂಕ್ಲಿಯರ್ ಐಸೊಬಾರ್ಸ್‌). ಎಂದರೆ ಅವುಗಳಲ್ಲಿರುವ ನ್ಯೂಕ್ಲಿಯಾನುಗಳ ಸಂಖ್ಯೆ ಒಂದೇ ಆಗಿದ್ದು ತತ್ಸಂಬಂಧ ಪ್ರೋಟಾನ್ ಮತ್ತು ನ್ಯೂಟ್ರಾನುಗಳ ಸಂಖ್ಯೆಗಳು ಭಿನ್ನವಾಗಿವೆ (ನೋಡಿ- ಪರಮಾಣು-ಬಲಗಳು).          (ಯು.ಎಲ್.ಎ.)
ಐಸೊಮರೇಸುಗಳು: ಐಸೊಮರುಗಳ (ಸಮಘಟಕಗಳ) ಪರಸ್ಪರ ಪರಿವರ್ತನೆಯ ಕ್ರಿಯೆಯನ್ನು ವರ್ಧಿಸುವ ಕಿಣ್ವಗಳು. ಜೈವಿಕ ವ್ಯವಸ್ಥೆಯಲ್ಲಿ ಈ ಬಗೆಯ ಅನೇಕ ಕಿಣ್ವಗಳಿವೆ. ಅವುಗಳಲ್ಲಿ ಕೆಲವನ್ನೂ ಅವುಗಳು ವರ್ಧಿಸುವ ಕ್ರಿಯೆಗಳನ್ನೂ ಮುಂದೆ ಸೂಚಿಸಲಾಗಿದೆ.
1. ಅಮೈನೋ ಆಮ್ಲಗಳ ಮತ್ತು ಅವುಗಳ ಉತ್ಪನ್ನಗಳೊಡನೆ ವರ್ತಿಸುವ ಕಿಣ್ವಗಳು.
(ಚಿ) ಅಲಾನಿನ್ ರೆಸಿಮೇಸ್
      ಐ ಅಲಾನಿನ್  ಆ ಅಲಾನಿನ್
(b) ಲೈಸಿನ್ ರೆಸಿಮೇಸ್
   ಐ  ಲೈಸಿನ = ಆ ಲೈಸಿನ್
2. ಹೈಡ್ರಾಕ್ಸಿ ಆಮ್ಲ ಮತ್ತು ಅವುಗಳ ಉತ್ಪನ್ನಗಳೊಂದಿಗೆ ವರ್ತಿಸುವ ಕಿಣ್ವಗಳು.
 (ಚಿ) ಆ ರಿಬ್ಯುಲೋಸ್-5-ಫಾಸ್ಫೇಟ್ 3 ಎಪಿಮರೇಸ್
ಆ-ರಿಬ್ಯುಲೋಸ್-5-ಫಾಸ್ಫೇಟ್   ಆ-ಕ್ಸೈಲ್ಯುಲೋಸ್ 5 ಫಾಸ್ಫೇಟ್                                  
(b)  ಗ್ಲೂಕೋಸ್ 4-ಎಪಿಮರೇಸ್ 
UಆP ಗ್ಲೂಕೋಸ್ UಆP ಗ್ಯಾಲಾಕ್ಟೋಸ್       (ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ